ಸಾಮಾಜಿಕ ಪರಿವರ್ತನೆಕಾರರು ಕಲ್ಯಾಣ ಶರಣರು 

ಲೇಖನ

ಸಾಮಾಜಿಕ ಪರಿವರ್ತನೆಕಾರರು

ಕಲ್ಯಾಣ ಶರಣರು

ಡಾ.ದಾನಮ್ಮ ಝಳಕಿ

ಸಾಮಾಜಿಕ ಪರಿವರ್ತನೆಕಾರರು ಕಲ್ಯಾಣ ಶರಣರು

ಪರಿವರ್ತನೆ ಸರ್ವವ್ಯಾಪಕವಾದ ಒಂದು ಪ್ರಕ್ರಿಯೆಯಾಗಿದೆ. ಪರಿವರ್ತನೆ ಅಥವಾ ಗತಿಶೀಲತೆ ಸಮಾಜದ ಆಂತರಿಕ ಲಕ್ಷಣಗಳಲ್ಲಿ ಒಂದಾಗಿದೆ. ಸಮಾಜಶಾಸ್ತ್ರೀಯ ದೃಷ್ಠಿಕೋನದ ಪ್ರಕಾರ ಸಾಮಾಜಿಕ ರಚನೆ ಹಾಗೂ ಕಾರ್ಯಗಳಲ್ಲಿ ಕಂಡುಬರುವ ಬದಲಾವಣೆಯೇ ಸಾಮಾಜಿಕ ಬದಲಾವಣೆ. ಸಮಾಜದಲ್ಲಿ ಅನೇಕ ಅಂಶಗಳ ಮೂಲಕ ಬದಲಾವಣೆಯನ್ನು ಕಾಣಬಹುದು ಉದಾಹರಣೆಗೆ ಭೌಗೋಳಿಕ ಅಥವಾ ಭೌತಿಕ ಅಂಶಗಳು, ಭೌದ್ಧಿಕ ಅಂಶಗಳು, ಜೈವಿಕ ಅಂಶಗಳು, ಸಾಂಸ್ಕೃತಿಕ ಅಂಶಗಳು, ತಾಂತ್ರಿಕ ಅಂಶಗಳು, ಶೈಕ್ಷಣಿಕ ಅಂಶಗಳು, ಸಾಮಾಜಿಕ ಅಂಶಗಳು, ಆರ್ಥಿಕ ಅಂಶಗಳು, ಧಾರ್ಮಿಕ ಅಂಶಗಳು, ರಾಜಕೀಯ, ವೈಜ್ಞಾನಿಕ ಅಂಶಗಳು,  ಅಂಶಗಳು ಇತ್ಯಾದಿಗಳನ್ನು ಉದಾಹರಿಸಬಹುದು.

ಈ ಮೇಲಿನ ಅಂಶಗಳಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಹಾಗೂ ಸಾಂಸೃತಿಕವಾಗಿ ಪರಿವರ್ತನೆಯ ಹರಿಕಾರರಾಗಿ ಕಾರ್ಯ ಮಾಡಿದ್ದನ್ನು ವಿಶೇಷವಾಗಿ ಚರ್ಚೆಗೆ ತೆಗೆದುಕೊಳ್ಳಬಯಸುತ್ತೇನೆ.  ಸಾಮಾಜಿಕ ಪರಿವರ್ತನೆಯಲ್ಲಿ ವಿಶೇಷವಾಗಿ ಲಿಂಗ ಸಮಾನತೆಯನ್ನು ಹಾಗೂ ಧಾರ್ಮಿಕ ಪರಿವರ್ತನೆಯಲ್ಲಿ, ದೇಹಾಲಯ ಸಂಸ್ಕೃತಿಯನ್ನೂ,  ಸಾಂಸ್ಕೃತಿಕ ಪರಿವರ್ತನೆಯಲ್ಲಿ ಶೈಕ್ಷಣಿಕ ಮೌಲ್ಯಗಳು, ಮನೋವಿಜ್ಞಾನಿಯಾಗಿ, ವಿಶ್ವಭಾತೃತ್ವ, ಪ್ರಜಾಪ್ರಭುತ್ವ ಹಾಗೂ ಅಹಿಂಸಾ ತತ್ವದ ಮೂಲಕ  ಪರಿವರ್ತನಾಕಾರರಾಗಿ ಶರಣರು ಎಂಬುವದರ ಬಗ್ಗೆ ವಿಸ್ತೃತವಾಗಿ ವಿವರಿಸುತ್ತಾ, ಪ್ರಸ್ತುತ ಅಂಶಗಳನ್ನು ಅದರೊಂದಿಗೆ ಮುಖಾಮುಖಿಯಾಗಿಸಿ ವಿವರಿಸಲು ಬಯಸುತ್ತೇನೆ.

ಸಂಪ್ರದಾಯದ ಗವಿಯಲ್ಲಿ ಅಜ್ಞಾನಪೂರಿತ ಮೌಢ್ಯದ ಕತ್ತಲೆಯಲ್ಲಿ ಕರ್ಮವಾದದ ನಿದ್ರೆಯಲ್ಲಿ ಮಲಗಿದ್ದವರನ್ನು ಜಾಗೃತಿಸಿ ನಂತರ ಸಂಘಟಿಸಿ, ಸೂತ್ರದಾರರಾಗಿ ನಿಂತು ಕಾರ್ಯಮಾಡಿದವರು ನಮ್ಮ ಶರಣರು. ಅಂಧಶ್ರದ್ಧೆಯ ಪ್ರವಾಹದಲ್ಲಿ ಪತಿತವಾಗಿ ಸಾಗುತ್ತಿದ್ದ ಜನಾಂಗದ ವಿಚಾರ ಪ್ರವಾಹವನ್ನು ಬದಲಿಸಿ ಹೊಸದಿಕ್ಕಿಗೆ ಹರಿಸಿದ ಪ್ರವಾದಿ ಬಸವಣ್ಣನವರು. ಆರ್ಥರ್‌ ಮೈಲ್‌ ಹೇಳುತ್ತಾರೆ “ ಭಾರತದ ಮೊಟ್ಟಮೊದಲ ಸ್ವತಂತ್ರ ವಿಚಾರವಾದಿ ( First Indian free Thinker) ಬಸವಣ್ಣ. ಅವರನ್ನು ಭಾರತದ ಮಾರ್ಟಿನ್‌ ಲೂಥರ ಎನ್ನಬಹುದು. ವಿಚಾರವಾದದ ದೃಷ್ಠಿಯಿಂದ ಬಸವಣ್ಣನನ್ನು ಲೂಥರನಿಗೆ ಹೋಲಿಸಬಹುದಾದರೂ, ಹೋಲಿಕೆ ಪರಿಪೂರ್ಣವಲ್ಲ ಎಂದೇ ಹೇಳಬಹುದು.

ಬಸವಣ್ಣನವರು ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದರು. ಸಮಾಜವಾದಿ ಚಿಂತಕರಾಗಿದ್ದರು. ಅವರ ವಿಚಾರಗಳಲ್ಲಿ ಸಮಗ್ರ ಸಮಾಜದ ದೃಷ್ಟಿಕೋನವಿರುತ್ತಿತ್ತು. ಕಲ್ಯಾಣವು ಸಮೃದ್ಧಿಯ ಬೀಡಾಗಲು ಕಾರಣವಾದದ್ದು ಕಾಯಕಜೀವಿಗಳೇ. ಕಾಯಕದ ತುಡಿತ ಸ್ವಾವಲಂಬಿ ಸಮಾಜ ನಿರ್ಮಾಣ. ಹೊಟ್ಟೆಪಾಡಿಗಾಗಿ ಅಥವಾ ಕುಟುಂಬದ ಪೋಷಣೆಗಾಗಿ ಕೈಗೊಳ್ಳುವ ದುಡಿಮೆ ಕಾಯಕವಾಗಲಾರದು. ಅದೇ ರೀತಿ ಕೀರ್ತಿ- ಪ್ರತಿಷ್ಠೆಗಳಿಗಾಗಿ ಮಾಡುವ ಜನಕಲ್ಯಾಣ ಕಾರ್ಯವೂ ಕಾಯಕವಾಗಲಾರದು. “ಎನ್ನೊಡಲ ಅವಸರಕ್ಕೆ ಕುದಿದೆನಾದಡೆ ತಲೆದಂಡ” ಎನ್ನುತ್ತಾರೆ ಬಸವಣ್ಣನವರು. ಹೀಗೆ ನಮ್ಮ ಹಿತದೊಂದಿಗೆ ಸಮಷ್ಟಿಯ ಹಿತವನ್ನೂ ಕಾಯುವ ಶಕ್ತಿ ಕಾಯಕದ್ದು. ಸತ್ಯ ಶುದ್ಧದಿಂದ ಗಳಿಸಿದ ಆದಾಯದಲ್ಲಿ ಒಂದು ಪಾಲು ದಾಸೋಹ ರೂಪದಲ್ಲಿ ಸಮಾಜಕ್ಕೂ, ಇನ್ನೊಂದು ಪಾಲು ತೆರಿಗೆಯ ರೂಪದಲ್ಲಿ ರಾಜ್ಯಕ್ಕೂ ಸಂದಾಯವಾಗಬೇಕು. ಇದು ಸಮಷ್ಟಿಯ ಏಳ್ಗೆಯಲ್ಲಿ ತನ್ನ ಅಭಿವೃದ್ಧಿಯನ್ನೂ, ಸಮಷ್ಟಿಯ ಹಿತದಲ್ಲಿ ತನ್ನ ಹಿತವನ್ನೂ ಕಾಣುವ ಶರಣರ ಕಾಯಕದ ನಡೆ.

1.        ಆರ್ಥಿಕ (ಅರ್ಥಶಾಸ್ತ್ರೀಯ)ವಾಗಿ ಸಮಾಜದ ಪರಿವರ್ತನೆ ಮಾಡಿದ ಶರಣರು                        

ಅರ್ಥಶಾಸ್ತ್ರದ ಮೂಲತತ್ವಗಳ ವಿವರಣೆಯನ್ನೂ ಸಹ ವಚನಗಳಲ್ಲಿ ಕಾಣಬಹುದು.

1.        ಕಾಯಕ ಉತ್ಪಾದನಾ ವ್ಯವಸ್ಥೆ

2.        ಪ್ರಸಾದ ಯೋಗ್ಯ ರೀತಿ ವಸ್ತುಗಳ ಉಪಯೋಗ

3.        ದಾಸೋಹ – ಯೋಗ್ಯ ರೀತಿ ವಸ್ತುಗಳ ವಿತರಣೆ

ಅರ್ಥಶಾಸ್ತ್ರದ ಉತ್ಪಾದನಾ ಅಂಗದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾಜದ ನಡುವೆ ತಾರತಮ್ಯ ಉಂಟಾಗುವ ಭೀತಿಯೇ ಹೆಚ್ಚು ಪ್ರಬಲವಾಗಿ ತೋರುತ್ತದೆ. ವ್ಯಕ್ತಿ ಮತ್ತು ಸಮಾಜದ ಎರಡೂ ಹಾಸು ಹೊಕ್ಕುಗಳು ಅದರ ಒಂದು ಎಳೆ ಕಿತ್ತಿದರೂ ಅರಿವೆ ವಿದ್ರೂಪಗೊಳ್ಳುತ್ತದೆ. ಆದ್ದರಿಂದ ವ್ಯಕ್ತಿ ಮತ್ತು ಸಮಾಜ ಇವುಗಳಲ್ಲಿ ಬೇಧವನ್ನು ಕಲ್ಪಿಸದೆ ಅವುಗಳಲ್ಲಿರುವ ಅನ್ಯೋನತ್ವವನ್ನು ಸಾಧಿಸಿ ಸಮಾಜದ ಉದ್ದೇಶವನ್ನೂ ವ್ಯಕ್ತಿ ಸ್ವಾತಂತ್ರ್ಯವನ್ನೂ ಸದಾ ಕಾಪಾಡಿಕೊಂಡು ಬರಬೇಕು. ಈ ಕಾಯಕ ಸಾಧಿಸಿದವರು ಬಸವಣ್ಣನವರು ಹಾಗೂ ನಮ್ಮ ಶರಣರು.

ಬಸವಣ್ಣನವರ ಆರ್ಥಿಕ ನೀತಿ ವಿಶಿಷ್ಟವಾದದ್ದು “you can not help the poor by destroying the rich” ಅನ್ನುವ ಅಬ್ರಹಾಂ ಲಿಂಕನ್ನನ ಅಭಿಮತಕ್ಕೆ ಬಸವಣ್ಣನ ಆರ್ಥಿಕ ನೀತಿ ಮೂಲ ಮಾತೃಕೆಯಂತಿದೆ. ಸಿರಿವಂತನನ್ನು ತುಳಿಯುವುದಕ್ಕಿಂತ ಬಡವನನ್ನು ಮೇಲೆತ್ತುವುದು ಅವರ ಧ್ಯೇಯವಾಗಿತ್ತು ಹೀಗೆ ಆರ್ಥಿಕ ಸಮಾನತೆ ತರುವ ತತ್ವವು ದಾಸೋಹದಲ್ಲಿತ್ತು.

ಬಂಡವಾಳಶಾಹಿಗಳ ಅಮಾನವೀಯ ನಡೆ, ಅಮಾನುಷ ವರ್ತನೆಯ ವಿರುದ್ಧ ಜಗತ್ತಿನಾದ್ಯಂತ ಅನೇಕ ಕಡೆ ಕಾರ್ಮಿಕ ಸಂಘಟನೆಗಳು ರೂಪುತಳೆದಿವೆ. ಕಾರ್ಮಿಕನೊಬ್ಬನ ರಕ್ತದಲ್ಲಿ ತೊಯ್ದ ಅಂಗಿಯನ್ನೇ ಕೆಂಪು ಬಾವುಟವಾಗಿಸಿ ಮುನ್ನಡೆದ ಕಾರ್ಮಿಕರ ಹೋರಾಟ, ಚಳವಳಿಗೆ ಅಮೆರಿಕ ಸಾಕ್ಷಿಯಾದದ್ದು 19ನೇ ಶತಮಾನದಲ್ಲಿ. ಜಗತ್ತಿನ ಮೊದಲ ಸಮಾಜವಾದಿ ದೇಶ ಸೋವಿಯತ್ ಒಕ್ಕೂಟವು he who does not work neither shall he eat (‘ದುಡಿಯಲಾರದವ ತಿನ್ನಲಿಕ್ಕೂ ಅರ್ಹನಲ್ಲ’) ಎಂಬ ಧ್ಯೇಯ ವಾಕ್ಯವನ್ನಿಟ್ಟುಕೊಂಡು ಸಂವಿಧಾನ ರಚಿಸಿತು. ಕಮ್ಯೂನಿಸ್ಟ್ ರಾಷ್ಟ್ರಗಳಿಂದ ಹಿಡಿದು ಎಲ್ಲಾ ಸಿದ್ಧಾಂತಗಳ ರಾಜ್ಯಾಡಳಿತಗಳು ಕಾರ್ಮಿಕರ ಹಿತಾಸಕ್ತಿಗಾಗಿ ಅನೇಕ ಕಾನೂನುಗಳನ್ನು ರಚಿಸಿವೆ. ಹೊಸ ನಿಯಮಗಳನ್ನು ಹುಟ್ಟುಹಾಕಿವೆ. ಆದರೆ ದುಡಿವ ಜನರಿಗೆ ಆರ್ಥಿಕ ನ್ಯಾಯ ಒದಗಿಸಲು, ಸಾಮಾಜಿಕ ಗೌರವ ತಂದುಕೊಡಲು ಗಣನೀಯವಾಗಿ ವಿಫಲವಾಗಿವೆ!

            ಕಾರ್ಲಮಾರ್ಕ್ಸ  ಅವರ ಸಿದ್ಧಾಂತ ಅಳವಡಿಸಿಕೊಂಡ ರಷ್ಯಾ ದೇಶದ ಜಗತ್ತಿನ ಉಕ್ಕಿನ ಕೋಟೆ ಎಂದು ಹೆಸರಾಗಿತ್ತು.  ಈಗ ಛಿದ್ರ ಛಿದ್ರವಾಗಿದೆ. ಕಾಲಚಕ್ರದಲ್ಲಿ ರಾಜಕೀಯ ಸಿದ್ಧಾಂತಗಳು ಬಿದ್ದುಹೋಗುತ್ತಿವೆ ಆದರೆ ವಚನ ಸಾಹಿತ್ಯ ಬಿದ್ದು ಹೋಗಲು ಅವಕಾಶವಿಲ್ಲ.

                 ನಾನು ಆರಂಭವ ಮಾಡುವೆನಯ್ಯಾ ಗುರುಪೂಜೆಗೆಂದು

                  ನಾನು ಬೆವಹಾರವ ಮಾಡುವೆನಯ್ಯಾ ಲಿಂಗಾರ್ಚನೆಗೆಂದು

                 ನಾನು ಪರಸೇವೆಯ ಮಾಡುವೆನಯ್ಯಾ ಜಂಗಮದಾಸೋಹಕ್ಕೆಂದು

                ನಾನಾವಾವ ಕರ್ಮಂಗಳ ಮಾಡಿದಡೆಯೂ

               ಆ ಕರ್ಮ ಫಲಭೋಗವ ನೀಕೊಡುವೆಯೆಂಬುದ ನಾ ಬಲ್ಲೆನು

              ನೀ ಕೊಟ್ಟ ದ್ರವ್ಯವ ನಿಗಲ್ಲದೆ ಮತ್ತೊಂದು ಕ್ರೀಯ ಮಾಡೆನು

             ನಿಮ್ಮ ಸೊಮ್ಮಿಂಗೆ ಸಲ್ಲಿಸುವೆನು ನಿಮ್ಮಾಣೆ, ಕೂಡಲ ಸಂಗಮ ದೇವಾ.

              —ಬಸವಣ್ಣನವರು

ಹೀಗೆ ಶರಣರು ಪ್ರತಿಪಾದಿಸಿದ ರೀತಿಯಲ್ಲಿ ದುಡಿದ ಹಣವನ್ನು ಜಂಗಮ ಸಂಬಂಧಿ ವ್ಯವಹಾರಗಳಿಗೆ ಸಲ್ಲಿಸಿದರೆ ಆರ್ಥಿಕ ಸರ್ವಾಧಿಕಾರ ಉಂಟಾಗಲು ಹಾಗೂ ಬಂಡವಾಳಶಾಹಿ ಸಂದರ್ಭಗಳು ಉಂಟಾಗಲು ಸಮಾಜದಲ್ಲಿ ಸಾಧ್ಯವೇ ಇಲ್ಲ. ಹೀಗಾಗಿ ಮಾರ್ಕ್ಸವಾದದ ಸಂಪೂರ್ಣ ಸ್ವರೂಪದ ಆರ್ಥಿಕ ಚಿಂತನೆಯ ಸಮಾಜವಾದ 800 ವರ್ಷಗಳ ಹಿಂದೆಯೇ ಅದಕ್ಕಿಂತ ಉತ್ಕೃಷ್ಠವಾದ ಉದಾತ್ತೀಕರಣದ ಪರಿಕಲ್ಪನೆ ಬಸವಾದಿ ಶರಣರು ಆಚರಿಸಿದ್ದರೆಂದು ನಿರ್ವಿವಾದವಾದ ವಿಚಾರವಾಗಿದೆ ಎಂದು ತಿಳಿಯಬಹುದಾಗಿದೆ. ಈ ಹಿನ್ನೆಲೆಯಲ್ಲಿ  ಕಾಯಕ – ಉತ್ಪಾದನಾ ವ್ಯವಸ್ಥೆಯಾಗಿ ನೋಡಬಹುದು ಹಾಗಾದರೆ ಕಾಯಕ ಪರಿಕಲ್ಪನೆಯ ಬಗ್ಗೆ ನೋಡೋಣ

ಕಾಯಕ :

ವಚನಕಾರರ ದೃಷ್ಠಿಯಿಂದ ಕಾಯಕ ಮತ್ತು ಕರ್ಮಗಳಲ್ಲಿ ಅಪಾರ ವ್ಯತ್ಯಾಸವಿದೆ. ಕಾಯಕ ಸಿದ್ಧಾಂತ ಚೈತನ್ಯದ ಪ್ರತೀಕವಾದರೆ ಕರ್ಮವು ಜಡತ್ವದ ಪ್ರತೀಕವಾಗಿದೆ. ಕಾಯಕ ಜನಸಂಸ್ಕೃತಿಯ ಪರವಾದರೆ ಕರ್ಮಶಾಸ್ತ್ರ ದಾಸ್ಯದ ಪರವಾಗಿದೆ. ಕಾಯಕಸಿದ್ಧಾಂತಕ್ಕೆ ದೇಹ ಮತ್ತು ಮನಸ್ಸಿನ ಸಮತೋಲನ ಕಾಪಾಡುವ ಶಕ್ತಿ ಇದೆ. ಈ ಪೃಥ್ವಿಯನ್ನು ಬದುಕಲು ಹೆಚ್ಚು ಹೆಚ್ಚು ಯೋಗ್ಯಗೊಳಿಸುವ ಆಶಯವಿದೆ. ಕಾಯಕದ ಮೂಲಕ ಸ್ವತಂತ್ರನಾಗುತ್ತಾನೆ. ಪರಾವಲಂಬಿ ಜೀವನದಿಂದ ವ್ಯಕ್ತಿತ್ವವೇ ಕುಬ್ಜವಾಗುತ್ತದೆ. ಕಾಯಕವು ಆತ್ಮಗೌರವವನ್ನು ರಕ್ಷಿಸುತ್ತದೆ. ಆದ್ದರಿಂದ ವಚನಗಳು ಸಾರಿ ಸಾರಿ ಹೇಳುತ್ತಿವೆ ಕಾಯವೇ ಕೈಲಾಸ, ಕಾಯಕವೇ ಕೈಲಾಸ ಎಂದು. ಹೀಗೆ ಶರಣ ಪರಂಪರೆಯು ಜಗತ್ತಿನಲ್ಲಿಯೇ ಶ್ರಮ ಸಂಸ್ಕೃತಿಗೆ ಹೆಚ್ಚಿಗೆ ಮಹತ್ವ ಜಗತ್ತಿನ ಮೊಟ್ಟ ಮೊದಲ  ವ್ಯವಸ್ಥೆಯಾಗಿದೆ.

ಶ್ರಮಜೀವನದ ಶ್ರೇಷ್ಠತೆಯನ್ನು ಸಂಸ್ಥಾಪಿಸುವ ಸಲುವಾಗಿ, ವೃತ್ತಿ ಗೌರವವನ್ನು ಕಾಪಾಡುವ ಸಲುವಾಗಿ, ಸಮಾಜದ ಐಕ್ಯವನ್ನು ಸುಭದ್ರಗೊಳಿಸುವ ಸಲುವಾಗಿ, ಸಂಪತ್ತನ್ನು ವೃದ್ಧಿಗೊಳಿಸಲು ಸಂಪನ್ಮೂಲಗಳ ಸಮರ್ಥ ಬಳಕೆಗಾಗಿ ಕಾಯಕ ಸಿದ್ಧಾಂತಕ್ಕೆ ಒತ್ತುಕೊಟ್ಟರು

            ಕಾಯಕ ತತ್ವವನ್ನು ವ್ಯಾಖ್ಯಾನಿಸಿದ ಈ ಕೆಳಗಿನ ವಚನದಲ್ಲಿ ಮಾರಯ್ಯನ ವಿಚಾರಶ್ರೇಣೆಯನ್ನು ಅರ್ಥಗರ್ಭಿತವಾಗಿ ನಿರೂಪಿಸಲಾಗಿದೆ.

ಕಾಯಕದಲ್ಲಿ ನಿರತನಾದಡೆ

ಗುರುದರ್ಶನವಾದಡೂ ಮರೆಯಬೇಕು

ಲಿಂಗಪೂಜೆಯಾದಡೂ ಮರೆಯಬೇಕು

ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು

ಕಾಯಕವೇ ಕೈಲಾಸವಾದ ಕಾರಣ

ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು.”

3.        ದಾಸೋಹ ಯೋಗ್ಯ ರೀತಿ ವಸ್ತುಗಳ ವಿತರಣೆ

ಎಂದು ಆಯ್ದಕ್ಕಿ ಮಾರಯ್ಯ ಹೇಳುವಲ್ಲಿ ಕಾಯಕದ ಮಹತ್ವ ಪರಾಕಾಷ್ಠೆಯನ್ನು ತಲುಪುತ್ತದೆ.

ಜಗತ್ತಿನ ಪ್ರಗತಿಪರ ರಾಷ್ಟ್ರಗಳಾದ ಜಪಾನ, ಜರ್ಮನಿ ಮೊದಲಾದ ದೇಶಗಳು ಈ ತತ್ವವನ್ನು ಎತ್ತಿಕೊಂಡು ಕೃತಿಗಿಳಿಸಿರುತ್ತವೆ. ದಾರುಣ ದುರಂತವೆಂದರೆ ಯಾವ ನೆಲದಲ್ಲಿ ಈ ಸಿದ್ಧಾಂತವು ವ್ಯಕ್ತಗೊಂಡಿದೆಯೋ ಅಲ್ಲಿಯೇ ಇಂದು ನಿರುದ್ಯೋಗದ ತಾಂಡವ ನೃತ್ಯ ನಡೆದಿದೆ. ಇದಕ್ಕಿಂತ ವಿಪರೀತ ವಿಪರ್ಯಾಸ ಇನ್ನೊಂದುಂಟೇ? ರಾಷ್ಟ್ರದ ಪ್ರಗತಿಗೆ ಸಂಪನ್ಮೂಲಗಳೇ ಕಾರಣ ಈ ಸಂಪನ್ಮೂಲಗಳು ಹೆಚ್ಚಾಗಬೇಕಾದರೆ ಪ್ರತಿಯೊಬ್ಬರು ದುಡಿಯಲೇಬೇಕು. ಈ ದುಡಿತದಿಂದ ಜಡತ್ವ ತೊಲಗಿ, ಚೈತನ್ಯ ಹೊರಹೊಮ್ಮುತ್ತದೆ.

ಕಾಯಕವೇ ಪ್ರತಿಯೊಬ್ಬರ ಜೀವನದ ಕರ್ತವ್ಯವಾಗಬೇಕು ಈ ಕಾಯಕದಲ್ಲಿ ಮೇಲು ಕೀಳುಗಳಿರುವುದಿಲ್ಲ. ಮಾನವನಲ್ಲಿ ಸುಪ್ತವಾಗಿರುವ ವಿವಿಧ ಕ್ರಿಯಾಶಕ್ತಿಯನ್ನು ಉತ್ತಮಗೊಳಿಸಿ, ಅದರಿಂದ ತನಗೂ ಉಳಿದವರಿಗೂ ಸೊಗಸುಂಟಾಗುವಂತೆ ಮಾಡುವ ಕಲೆಯೇ ಕಾಯಕ. ಮಾನವನ ಭವಿಷ್ಯತ್ತಿಗೆ “ಜ್ಞಾನೋದಯದ ಕಣ್ಣು ಕಾಯಕದ ಕೈ” ಇದ್ದಂತೆ

ವೃತ್ತಿ ಎಂಬ ಸಾಮಾನ್ಯ ಅರ್ಥ ಕಾಯಕಕ್ಕಿದ್ದರೂ ಅದನ್ನೊಂದು ಜೀವನ ಮೌಲ್ಯವನ್ನಾಗಿ ಮಾಡಿದವರು 12 ನೇ ಶತಮಾನದ ಶರಣರು ಎಲ್ಲರೂ ದುಡಿಯಬೇಕು ಜೀವನದ ನಿರ್ವಹಣೆಗೆ ಸತ್ಯಶುದ್ಧವಾದ ಕಾಯಕವೊಂದಿರಲೇಬೇಕು. ನಡೆಸುವ ಕಾಯಕದಲ್ಲಿ ಮೋಸ ವಂಚನೆಗಳಿರಕೂಡದು ಕಾಯಕತತ್ವದಲ್ಲಿ ಸರ್ವರೂ ಸಮಾನರು. ಯಾರ ಹಂಗೂ ಇಲ್ಲದೇ, ಯಾರೊಡನೆ ಹೋರಾಟವೂ ಇಲ್ಲದೇ ಜೀವನವನ್ನೇ ಕೈಲಾಸವನ್ನಾಗಿ ಮಾಡುವ ಕ್ರಿಯಾತ್ಮಕ ತಪಸ್ಸೆ ಕಾಯಕ.

ನಾನು ಒಕ್ಕುಲತನ ಮಾಡುವೆ ; ಅದರ ಆದಾಯ ಗುರುಪೂಜೆಗೆ ಸಲ್ಲುವುದೆಂದು, ವ್ಯಾಪಾರವನ್ನು ಮಾಡುವೆ ; ಅದರ ಸಂಪಾದನೆ ಲಿಂಗಪೂಜೆಗೆ ಅನುವು ಮಾಡಿ ಕೊಡುವುದೆಂದು. ಬೇರೆಯವರ ಬಳಿ ಉದ್ಯೋಗವ ಮಾಡುವೆ, ಬರುವ ಆದಾಯವನ್ನು ಜಂಗಮ ಸೇವೆಗೆ ವಿನಿಯೋಗ ಮಾಡಬಹುದೆಂದು. ಯಾವ ಉದ್ಯೋಗ ಮಾಡಿದರೆ ಏನಂತೆ ಅದರ ಆದಾಯವನ್ನು ನಾನು ನಿಮ್ಮ ಕೆಲಸಗಳಿಗೆ ಬಳಸುವನೇ ವಿನಾ ದೈವೀ ಜೀವನಕ್ಕೆ ಹೊರತಾದ ಕೆಲಸಗಳಿಗೆ ಬಳಸುವುದಿಲ್ಲ

            ಹೀಗೆ ವಚನದಲ್ಲಿ ಸತ್ಯ ಶುದ್ಧ ಕಾಯಕದಿಂದ ಬಂದ ಹಣ ಪವಿತ್ರವಾದುದು ಎಂದು ಹೇಳುವುದರ ಮೂಲಕ ಕಾಯಕದ ಮಹತ್ವ ತಿಳಿಸಿದ್ದಾರೆ.

            ಅಣ್ಣ ಬಸವಣ್ಣನವರು ಎಲ್ಲರಿಗೂ ಕಾಯಕತತ್ವ ನೀಡಿ, ಆರ್ಥಿಕ ಭದ್ರತೆಗೂ, ನಿರುದ್ಯೋಗಕ್ಕೂ ಅಂದೇ ಪರಿಹಾರ ಸೂಚಿಸಿದ್ದಾರೆ. ಶರಣರ ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ದುಡಿಮೆಯೇ ಪರಿಪೂರ್ಣತೆಯ ಮಾರ್ಗವೆಂದು ತಿಳಿಸಿ ದುಡಿಮೆಯ ಗೌರವವನ್ನು ಹೆಚ್ಚಿಸಿದರು.

            ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ,

           ಏಡಿಸಿ ಕಾಡಿತ್ತು ಶಿವನ ಡಂಗುರ,

           ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ,

           ಮಾಡಿದೆನೆಂಬುದು ಮನದಲ್ಲಿಲ್ಲದಿದ್ದಡೆ,

           ಬೇಡಿತ್ತನೀವನು ಕೂಡಲಸಂಗಮದೇವ.

           – ಬಸವಣ್ಣ

ಕಾರಣ ಯಾವುದೇ ಕಾರ್ಯ ಮಾಡಿದರೂ ಅದರಲ್ಲಿ ನಿಷ್ಠೆ ಪ್ರಾಮಾಣಿಕತೆ ಅತ್ಯವಶ್ಯಕ ತಾ ಮಾಡಿದೆನೆಂಬುದು ಮನದಲ್ಲಿ ಕೂಡ ಹೊಳೆಯಬಾರದು. ದುಡಿಮೆ ಮತ್ತು ಆರಾಧನೆ ಎರಡರ ಸಮನ್ವಯೇ ಕಾಯಕ ಎಂದಿರುವರು ವಚನಕಾರರು

            ಕಾಯಕದಿಂದ ಇಹಲೋಕವೇ ಕೈಲಾಸವಾಗುವುದು. ಕಾಯಕದಲ್ಲಿ ಮಾದಾರ ಚೆನ್ನಯ್ಯ ತನಗಿಂತ ಶ್ರೇಷ್ಠ ಎಂದು ಅವನನ್ನು ಪುರಸ್ಕರಿಸಿದರು. ಮಾದರ ಚೆನ್ನಯ್ಯನ ಚಮ್ಮಾವುಗೆಯ ಕಾಯಕ ಕೀಳಲ್ಲ, ಚೋಳರಸನ ವೈಭವದ ಆರಾಧನೆ ಮೇಲಲ್ಲ ಎಲ್ಲವೂ ಕಾಯಕದ ದೃಷ್ಠಿಯಲ್ಲಿ ಒಂದೇ ಎಂದು ಸಾರಿದರು. ಹೀಗೆ ವೃತ್ತಿ ಸಮಾನತೆಯನ್ನು ಎತ್ತಿ ಹಿಡಿದರು.

            ನಮ್ಮ ದೇಶದ ಪ್ರಮುಖ ಆರ್ಥಿಕ ಸಮಸ್ಯೆಗಳಿಗೆ ಬಡತನ, ನಿರುದ್ಯೋಗ ಮುಂತಾದವುಗಳಿಗೆ ಪರಿಪೂರ್ಣ ಪರಿಹಾರ ಶರಣ ತತ್ವದಲ್ಲಿದೆ. : ಆಳಾಗಿ ದುಡಿಯಬಲ್ಲವ ಅರಸನಾಗಿ ಉಣಬಲ್ಲ” ಎಂಬ ಗಾದೆಯನ್ನು ಬಸವಣ್ಣನವರು ತತ್ವಮಯ ಅಲ್ಲದೆ ಪ್ರಯೋಗಮಯವನ್ನಾಗಿ ಮಾಡಿದ್ದಾರೆ.

            ಒಟ್ಟಿನಲ್ಲಿ ಶರಣರು ತಿಳಿಸಿದಂತೆ ಕಾಯಕ ನಮ್ಮ ಸಮಾಜದಲ್ಲಿ ಅಳವಡಿಸಿದರೆ ಬ್ರಷ್ಟಾಚಾರ, ಬಡತನ, ನಿರುದ್ಯೋಗ ಇಲ್ಲದ ಸಮಾಜ ಕಟ್ಟಲು ಸಾಧ್ಯ.

            ವಿನೋಬಾ ಭಾವೆಯವರು ಕಾಯಕ ತತ್ವ ಬಹುವಾಗಿ ಮೆಚ್ಚಿ ನಮ್ಮಲ್ಲಿ ಸುಧಾರಣೆ ಯುಗ 12 ನೇ ಶತಮಾನದಲ್ಲಿಯೇ ಪ್ರಾರಂಭವಾಯಿತು ಎಂದಿದ್ದಾರೆ.

            ಖ್ಯಾತ ಕಾಯಕಜೀವಿಯಾದ ಶಿವಶರಣ ನುಲಿಯ ಚಂದಯ್ಯ ತನ್ನ ವಚನದಲ್ಲಿ ಈ ರೀತಿಯಾಗಿ ಹೇಳುತ್ತಾರೆ

ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ.

ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು.

ಗುರುವಾದಡೂ ಚರಸೇವೆಯ ಮಾಡಬೇಕು.

ಲಿಂಗವಾದಡೂ ಚರಸೇವೆಯ ಮಾಡಬೇಕು.

ಜಂಗಮವಾದಡೂ ಚರಸೇವೆಯ ಮಾಡಬೇಕು

ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು. / 21

ಕಾಯಕ ತತ್ವದಲ್ಲಿ ಗುರು, ಲಿಂಗ, ಜಂಗಮವನ್ನು ತೊಡಗಿಸಿಕೊಳ್ಳುವುದರ ಮೂಲಕ ಎಲ್ಲರೂ ಒಂದಿಲ್ಲೊಂದು ಕಾಯಕ ಮಾಡಿ ಬದುಕಬೇಕೆಂಬುವುದು ಶರಣರ ನಿಲುವಾಗಿತ್ತು.

2.        ಸಾಮಾಜಿಕ ಪರಿವರ್ತನೆ – ಶರಣರ ಕಾಲದಲ್ಲಿ ಲಿಂಗ ಸಮಾನತೆ ಮೂಲಕ ಪರಿವರ್ತನೆ – ಸ್ತ್ರೀ ಸಮಾನತೆ

ಸಮಾಜದಲ್ಲಿ ವಿವಿಧ ಜಾತಿ, ಕಂದಾಚಾರ, ಮೂಢನಂಬಿಕೆಗಳನ್ನು ತಿರಸ್ಕರಿಸಿ  ದಲಿತರನ್ನು, ದಮನಿತರನ್ನು, ಮಹಿಳೆಯರನ್ನು, ಬಡವರನ್ನು ಹೀಗೆ ಅಂಚಿನಲ್ಲಿರುವವರನ್ನು ಮೇಲೆತ್ತುವ ಕಾರ್ಯವನ್ನು ನಮ್ಮ ಶರಣರು ಮಾಡುವ ಮೂಲಕ ಸಮಾಜದಲ್ಲಿ ಪರಿವರ್ತನೆಯ ಯುಗಕ್ಕೆ ಹರಿಕಾರರಾದರು.

ಲಿಂಗಭೇದ ದ ಹೆಸರಿನಲ್ಲಿ ಇಂದಿಗೂ ಎಷ್ಟೋ ದೇಶಗಳು ಮಹಿಳೆಯರಿಗೆ ನೀಡುವ ಅನೇಕ ಸೌಲಭ್ಯಗಳನ್ನು ನೀಡಲು ನಿರಾಕರಿಸುತ್ತಿರುವ ಈ ಹೊತ್ತಿನಲ್ಲಿಯೂ ಆದ್ಯವಚನಕಾರ ಜೇಡರ ದಾಸಿಮಯ್ಯನವರ ವಚನ ಮಹತ್ವಪೂರ್ಣವಾದ ಒಳನೋಟಗಳನ್ನು ನೀಡುತ್ತದೆ.

ಮೊಲೆ, ಮುಡಿ ಬಂದಡೆ ಹೆಣ್ಣೆಂಬರು

ಗಡ್ಡ ಮೀಸೆ ಬಂದಡೆ ಗಂಡೆಂಬರು

ಒಳಗೆ ಸುಳಿವಾತ್ಮನು ಹೆಣ್ಣೂ ಅಲ್ಲ, ಗಂಡೂ ಅಲ್ಲ ರಾಮನಾಥ

ಹೆಣ್ಣು ಮತ್ತು ಗಂಡಿನ ನಡುವಿನ ವ್ಯತ್ಯಾಸ ಕೇವಲ ಶಾರೀರಿಕವಾದದ್ದೇ ವಿನಃ ಬೌದ್ಧಕವಾಗಿ ಇಬ್ಬರೂ ಸಮಾನ ಸಾಮರ್ಥ್ಯವುಳ್ಳವರು ಎಂಬುದನ್ನು ಸ್ವತಂತ್ರ ಮನೋಧರ್ಮದಿಂದ ಇಡೀ ಜಗತ್ತಿಗೆ ಸಾರಿದ ಮೊದಲ ಉದಾರವಾದಿ ಚಿಂತಕ ಜೇಡರ ದಾಸಿಮಯ್ಯ ಎಂಬುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಾರದು ಈ ಮೂಲಕ ಲಿಂಗ ತಾರತಮ್ಯದ ಮೂಲಕ ನಡೆಯಬಹುದಾದ ಶೋಷಣೆಗೆ ಪೂರ್ಣವಿರಾಮ ನೀಡಿ, ಸ್ತ್ರೀ ಸ್ವಾತಂತ್ರ್ಯದ ಮಹತ್ವವನ್ನು ಸಾರುವುದರ ಮೂಲಕ ಜಗತ್ತಿನ ಮೊದಲಿಗರಾದವರು ವಚನಕಾರರು.

ಬೌದ್ಧ, ಜೈನ ಮತ್ತು ಕ್ರಿಶ್ಚಿಯನ್‌ ಧರ್ಮಗಳು ಮಾನವ ಮಾನವರ ನಡುವೆ ಸಮಾನತೆಯನ್ನು ಬೋಧಿಸಿದರೂ ಗಂಡು ಹೆಣ್ಣಿನ ನಡುವಿನ ಅಂತರವನ್ನು ಪೂರ್ಣ ಮುಚ್ಚಿಹಾಕುವಲ್ಲಿ ಹಿಂದೇಟು ಹಾಕಿದ್ದಾರೆಂಬುದರಲ್ಲಿ ಸಂಶಯವಿಲ್ಲ. ಮೊಟ್ಟ ಮೊದಲಿಗೆ ಗಂಡು ಹೆಣ್ಣಿನ ನಡುವಿನ ಅಸಮಾನತೆಯನ್ನು ಬೇಧಿಸಿ ಹೆಣ್ಣಿಗೂ ತನ್ನ ವ್ಯಕ್ತಿತ್ವ ವಿಕಾಸವನ್ನು ಸ್ವತಂತ್ರವಾಗಿ ಪಡೆಯುವ ಹಕ್ಕು ಇದೆ ಎಂದು ಬೋಧಿಸಿದ್ದು ಬಸವಣ್ಣನವರು ಹಾಗೂ ಬಸವಾದಿ ಶರಣರು ಮಾತ್ರ. ಅನುಭವ ಮಂಟಪ ಸಮಾಜದ ಎಲ್ಲ ಹಂತಗಳಿಂದ ಬರುವ ಎಲ್ಲ ಮಹಿಳೆಯರಿಗೆ ವೇದಿಕೆಯನ್ನು ಒದಗಿಸಿ ಪ್ರೋತ್ಸಾಹವನ್ನು ಕೊಟ್ಟು ತನ್ನ ಪ್ರಗತಿಶೀಲ ಸ್ವರೂಪವನ್ನು ತೋರಿಸಿಕೊಟ್ಟಿತು.

ಹೊನ್ನು ಮಾಯೆ ಎಂಬರು, ಹೊನ್ನು ಮಾಯೆಯಲ್ಲ.

ಹೆಣ್ಣು ಮಾಯೆ ಎಂಬರು, ಹೆಣ್ಣು ಮಾಯೆಯಲ್ಲ.

ಮಣ್ಣು ಮಾಯೆ ಎಂಬರು, ಮಣ್ಣು ಮಾಯೆಯಲ್ಲ.

ಮನದ ಮುಂದಣ ಆಸೆಯೆ ಮಾಯೆ ಕಾಣಾ ಗುಹೇಶ್ವರ./1626

 ಎಂದು ಅಲ್ಲಮಪ್ರಭುಗಳು ಸಹ ತಮ್ಮ ವಚನಗಳಲ್ಲಿ ಎಚ್ಚರಿಸಿದ್ದಾರೆ ಈ ಮೂಲಕ ಎಲ್ಲ ಹೆಣ್ಣು ಮಕ್ಕಳ ಕಣ್ಣು ತೆರೆಸಿದರು.

 ಒಂದು ದೇಶ ಅಭಿವೃದ್ಧಿಪಥದಲ್ಲಿ ಸಾಗಬೇಕಾದರೆ ಆ ದೇಶದ ಎಲ್ಲ ನಾಗರಿಕರಿಗೆ ಸಮಾನ ಅವಕಾಶ ಕಲ್ಪಿಸಬೇಕು. ಇತ್ತೀಚಿಗೆ UNDP ಯವರು ಅಂಚಿನಲ್ಲಿರುವವರನ್ನು ಒಳಗೊಳ್ಳುವಿಕೆಯ ಮೂಲಕ ಅಭಿವೃದ್ಧಿ ಸಾಧಿಸಬೇಕು, ಸ್ಥಿರತೆ ಅಭಿವೃದ್ಧಿ ಆಗಬೇಕು ಎಂದೆಲ್ಲಾ ಹೇಳುವ ಅನೇಕ ಪರಿಕಲ್ಪನೆಗಳನ್ನು ನಮ್ಮ ಶರಣರು ಅನುಭವಮಂಟಪದ ಮೂಲಕ ಮಾಡಿದ್ದನ್ನು ಕಾಣಬಹುದಾಗಿದೆ.

3.        ಧರ್ಮದ ಮೂಲಕ ಸಾಮಾಜದ ಪರಿವರ್ತನಕಾರರು ನಮ್ಮ ಶರಣರು

ಜಗತ್ತಿನಲ್ಲಿಯೇ ಮಾನವತಾವಾದದ ತಳಹದಿಯ ಮೇಲೆ ಧರ್ಮವನ್ನು ಕಟ್ಟಿ ವಿಶ್ವದಲ್ಲಿಯೇ ಮಾದರಿ ಸಮಾಜದ ನಿರ್ಮಾಣ ಮಾಡುವದರ ಮೂಲಕ ಸಮಾಜಿಕ ಪರಿವರ್ತನೆಯನ್ನು ತಂದವರು ನಮ್ಮ ಶರಣರು.

1.        ಸಮಾಜಶಾಸ್ತ್ರೀಯ ಚಿಂತಕರಾಗಿ ವಚನಕಾರರ ವಚನಗಳು

ಸಮಾಜಶಾಸ್ತ್ರದ ಪಿತಾಮಹ ಎಂದೇ ಕರೆಯಿಸಿಕೊಳ್ಳುವ ಅಗಸ್ಟಕೋಮ್ಟನು ಹೇಳಿದ ವಿಕಾಸದ 3 ಹಂತಗಳು ಹಾಗೂ ಮಾನವತಾವಾದಿ ಧರ್ಮವನ್ನು ನಾವು 12 ನೇಯ ಶತಮಾನದಲ್ಲಿಯೇ ನಮ್ಮ ಶರಣರ ಜೀವನದಲ್ಲಿ ಕಾಣುತ್ತೇವೆ.

            ಅಗಸ್ಟಕೋಮ್ಟ ಸಮಾಜದ ವಿಕಾಸದ 3 ಹಂತಗಳನ್ನು ವಿಭಾಗಿಸಿದ್ದಾರೆ.

1.        ವಸ್ತುಪೂಜೆ ಕಾಲ್ಪನಿಕ ಹಂತ

                                           ನೀರ ಕಂಡಲ್ಲಿ ಮುಳುಗುವರಯ್ಯಾ,

                                         ಮರನ ಕಂಡಲ್ಲಿ ಸುತ್ತುವರಯ್ಯಾ,

                                         ಬತ್ತುವ ಜಲವ,ಒಣಗುವ ಮರನ

                                         ಮಚ್ಚಿದವರು ನಿಮ್ಮನೆತ್ತ ಬಲ್ಲರು?

                                         ಕೂಡಲಸಂಗಮದೇವಾ.

                                            –ಬಸವಣ್ಣವರು

2.        ಅನೇಕೇಶ್ವರವಾದ ಅಮೂರ್ತ ಹಂತ

3.        ಏಕೇಶ್ವರವಾದ ವೈಜ್ಞಾನಿಕ ಹಂತ

ಆದಿಕಾಲದಲ್ಲಿ ಮಾನವ ನಿಸರ್ಗ ಹಾಗೂ ತಮ್ಮ ಜೀವನಕ್ಕೆ ಸಂಬಂಧಿಸಿದ ವಸ್ತುಗಳು ದೇವರೆಂದು ಪೂಜಿಸುತ್ತಾರೆ ಅಮೂರ್ತ ಹಂತದಲ್ಲಿ ಮನಸ್ಸು ಇನ್ನಷ್ಟು ವಿಕಾಸ ಹೊಂದಿ ವಿಶ್ವದಲ್ಲಿ ಸಂಭವಿಸುವ ವಿವಿಧ ಘಟನೆಗಳು ಒಬ್ಬ ಅಥವಾ ಅನೇಕ ದೇವರಗಳ ಸೃಷ್ಟಿಗೊಳಿಂದೊಳಪಟ್ಟಿದೆ ಎಂದು ಅನೇಕ ದೇವರುಗಳು ಪೂಜಿಸಲ್ಪಡುವರು. ಮೂರನೇ ಹಂತದಲ್ಲಿ ವಿಶ್ವದ ಮೂಲದ ನಿಯಮಗಳನ್ನು ತಿಳಿದುಕೊಳ್ಳಲು ಯತ್ನಿಸುವುದು. ಮಾನವ ಜನಾಂಗ, ವಿಶ್ವವ್ಯಾಪಕತೆ, ದಯೆ ಇವುಗಳ ಚಿಂತನೆಯಿಂದ ಏಕೇಶ್ವರವಾದ ಬರುತ್ತದೆ.

            ಈ ಏಕೇಶ್ವರವಾದದ ಬಗ್ಗೆ 17 ನೇ ಶತಮಾನದಲ್ಲಿ ಅಗಸ್ಟಕೋಮ್ಟ ಹೇಳಿರುವುದನ್ನು ನಮ್ಮಲ್ಲಿ 12 ನೇ ಶತಮಾನದಲ್ಲಿ ಬದುಕಿ ತೋರಿಸಿದ ಸಮಾಜವೇ ಶರಣ ಸಮಾಜ, ಅವರ ತತ್ವಗಳ ವಚನಗಳು

            ಇನ್ನು ಅಗಸ್ಟಕೋಮ್ಟ ಮಾನವತಾವಾದಿ ಧರ್ಮದಲ್ಲಿ ಅಗಸ್ಟಕೋಮ್ಟನು ಸಾಂಪ್ರದಾಯಿಕ ಧರ್ಮವು ಮೂಢನಂಬಿಕೆ ಹಾಗೂ ಧರ್ಮಾಂಧತೆಯಿಂದ ಕೂಡಿದೆ ಎಂದು ಅಭಿಪ್ರಾಯಪಡುತ್ತಾ, ಧರ್ಮಕ್ಕೆ ಸಾಮಾಜಿಕ ಮಹತ್ವವಿದೆ ಅದು ಸಮಾಜವನ್ನು ನಿಯಂತ್ರಿಸುತ್ತದೆ. ಸಾಮಾಜಿಕ ಐಕ್ಯತೆ ಕಾಪಾಡುತ್ತದೆ. ವಿಭಿನ್ನ ವ್ಯಕ್ತಿಗಳ ನಡುವೆ ಸ್ನೇಹ-ಸಂಬಂಧ ಕಾಪಾಡಿ ಉಳಿಸಿಕೊಂಡು ಬರುತ್ತದೆ ಸಾಮಾಜದ ನೈತಿಕತೆಯನ್ನು ಕಾಪಾಡುವುದು ಧರ್ಮದ ಕರ್ತವ್ಯ. ಅದೇ ಮಾನವತೆಯ ಧರ್ಮ. ಹೊಸ ಧರ್ಮವು ಶಕ್ತಿಯುತವಾಗಿದೆ ಅದು ಜಾಗತಿಕ ಮಠವನ್ನು ಹೊಂದಿದೆ ಎಂದು ಹೇಳಿದ್ದಾರೆ.

            ಇದೇ ವಿಷಯವನ್ನು 12 ನೇ ಶತಮಾನದಲ್ಲಿ ನಮ್ಮ ವಚನಕಾರರು ವಚನಗಳ ಮೂಲಕ ಸಮಾಜಕ್ಕೆ ತಿಳಿಸಿಕೊಟ್ಟರು. ಒಬ್ಬನೇ ದೇವರು ಅಂದರೆ ಇಲ್ಲಿ ಚೈತನ್ಯ, ಒಂದೇ ಜಗತ್ತು, ಒಂದೇ ಮಾನವ ಜನಾಂಗ ಎನ್ನುವುದನ್ನು ತಿಳಿಸಿಕೊಟ್ಟು ಅದರಂತೆ ನಡೆದರು. ಅಗಸ್ಟಕೋಮ್ಟನ ಸಿದ್ಧಾಂತ ಪುನಃ ಮಠ, ಪುರೋಹಿತರ ಕಡೆ ವಾಲುತ್ತದೆ. ಆದರೆ ನಮ್ಮ ಬಸವಣ್ಣನವರ ಹಾಗೂ ಶರಣ ಶರಣೆಯರ ಅನುಭವ ಮಂಟಪ ಇದಕ್ಕೂ ಮೀರಿ ಬೆಳೆಯುತ್ತದೆ

            ಅಂದ ಮೇಲೆ 17 ನೇ ಶತಮಾನದಲ್ಲಿಕೇವಲ ಸಿದ್ಧಾಂತ ರಚನೆ ಮಾಡಿದ ಅಗಸ್ಟಕೋಮ್ಟನಿಗಿಂತ 12 ನೇ ಶತಮಾನದಲ್ಲಿ ಬಾಳಿ ಬದುಕಿದ ಹೊಸ ತತ್ವಗಳ ಮೂಲಕ ಜೀವನ ನಡೆಸಿದ ನಮ್ಮ ಶರಣರೇ ಶ್ರೇಷ್ಟವಲ್ಲವೇ? ಹಾಗಾದರೆ ಶರಣರೇ ಸಮಾಜಶಾಸ್ತ್ರದ ಪಿತಾಮಹರಲ್ಲವೇ?

ಮ್ಯಾಕ್ಸವೇಬರ ಮತ್ತು ವಚನಕಾರರು

ಮ್ಯಾಕ್ಸವೇಬರನು ಧರ್ಮ ಮತ್ತು ಸಮಾಜ ಇವುಗಳ ನಡುವಿನ ಸಂಬಂಧಗಳನ್ನು ಕುರಿತು ತನ್ನದೇ ಸಿದ್ಧಾಂತವನ್ನು “ಪ್ರೋಟೆಸ್ಟಂಟ ನೀತಿ ಹಾಗೂ ಬಂಡವಾಳಶಾಹಿ ಪ್ರವೃತ್ತಿ”(The protestant ethic and the spirit of Capitalism) ಎಂಬ ಗ್ರಂಥದಲ್ಲಿ ವಿವರಿಸಿದ್ದಾರೆ.

            ಜಗತ್ತಿನ ಅನೇಕ ಧರ್ಮಗಳ ಬಗ್ಗೆ ಅಭ್ಯಾಸ ಮಾಡಿದ ವೇಬರ ಯಾವ ಧರ್ಮವೂ ಕಾಯಕದ ಮಹತ್ವ ತಿಳಿಸಿಲ್ಲ ಕೇವಲ ಪುರೋಹಿತಶಾಹಿ ಬೆಳಸುತ್ತದೆ ಆದರೆ ಪ್ರೋಟೆಸ್ಟಂಟ ಧರ್ಮ ಮಾತ್ರ ಕಾಲ್ಪನಿಕ ಜಗತ್ತಿಗಿಂತ ವಾಸ್ತವಿಕ ಜಗತ್ತಿನ ಕಡೆಗೆ ಹೆಚ್ಚಿನ ಮಹತ್ವ ನೀಡಿ ಮೂಢನಂಬಿಕೆಗಳನ್ನು ಅಲ್ಲಗಳೆಯುತ್ತದೆ. ವೃತ್ತಿಪರ ಉದ್ಯೋಗಕ್ಕೆ ಮಹತ್ವ ನೀಡಿದೆ, ಶಿಕ್ಷಣಕ್ಕೆ ಮಹತ್ವನೀಡಿದೆ. ಪ್ರವೃತ್ತಿಪರ ಸನ್ಯಾಸಿಯಾದರೂ ದುಡಿಯುವುದು ತಪ್ಪದು ಎಂದು ಹೇಳಿ ಧರ್ಮದ ಮೂಲಕ ಆರ್ಥಕಾಭಿವೃದ್ಧಿ ಮಾಡುತ್ತದೆ ಎನ್ನುತ್ತಾರೆ.

            ಆದರೆ ವೇಬರ ಹೇಳಿದ್ದು 17 ನೆ ಶತಮಾನದಲ್ಲಿ ಬಹುಶಃ ಅವರು ಲಿಂಗಾಯತ ಧರ್ಮ ತಿಳಿದಿರಲಿಕ್ಕಿಲ್ಲ ಶರಣ ಶರಣೆಯರ ವಚನ ಓದಿರಲಿಕ್ಕಿಲ್ಲ ಏಕೆಂದರೆ ಜಗತ್ತಿನಲ್ಲಿಯೇ ಕಾಯಕವೇ ಕೈಲಾಸ ಎಂದು ಹೇಳಿದ್ದು ಮತ್ತು ಅದರಂತೆ ಜೀವನ ನಡೆಸಿದ್ದು ನಮ್ಮ ಶರಣ ಶರಣೆಯರು. ಅದು 12 ನೇಯ ಶತಮಾನದಲ್ಲಿಯೇ

            ವೇಬರ ತನ್ನ ಸಿದ್ಧಾಂತದಲ್ಲಿ ಬಡ್ಡಿ ವ್ಯವಹಾರ ಒಂದು ಉದ್ಯೋಗ ಎಂದರೆ ಅದನ್ನು ನಮ್ಮ ಶರಣ ಸಮಾಜ ಅಲ್ಲಗಳೆದು ಕಾಯಕದಿಂದಲೇ ಬಾಳಬೇಕೆಂದಿದ್ದಾರೆ.

“ಮೃತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ” ಎಂದು ಪರಕ್ಕಿಂತ ಇಹಕ್ಕೆ ಇಲ್ಲಿನ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ನಮ್ಮ ಶರಣರು

            ತಾನು ರಾಜಕೀಯ ಜೀವನದಲ್ಲೇ ಬದುಕಿ, ಸಮಾಜದ ನಡುವೆಯೇ ಸಂಸಾರಿಗನಾಗಿಯೂ ಬದುಕಿ, ಮುಕ್ತಿಗಾಗಿ ಮನೆ ಮಠ ಬಿಟ್ಟು ಹೋಗದೇ ಸಂಸಾರದಲ್ಲಿದ್ದೇ ಅರ್ಥಪೂರ್ಣ ಸಮರ್ಥ ಬದುಕನ್ನು ಕಾಣಬಹುದು ಎಂಬುದನ್ನ ತೋರಿಸಿಕೊಟ್ಟವರು ನಮ್ಮ ಬಸವಾದಿ ಶರಣರು.

2.        ದೇಹಾಲಯ ಸಂಸ್ಕೃತಿ

ವ್ಯಕ್ತಿ ವಿಕಾಸ HRD ಪರಿಕಲ್ಪನೆ. ಇದು 12 ನೇ ಶತಮಾನದಲ್ಲಿ ಶರಣರ ಜೀವನದಲ್ಲಿ ದೇಹಾಲಯ ಸಂಸ್ಕೃತಿಯಲ್ಲಿ ಕಾಣಬಹುದು.

“ಇಷ್ಟಲಿಂಗದ ಮೂಲಕ ದೇವರನ್ನು ಖಾಸಗೀಕರಣವಾದರೆ, ಜಂಗಮಲಿಂಗದ ಮೂಲಕ ಮನುಷ್ಯ ಸಾಮಾಜೀಕರಣವಾದ”

            ಈ ತತ್ವದಲ್ಲಿ “ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,

ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,

ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,

ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,

ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ. / 652

ಎಂಬ ವಚನವನ್ನು  ನಾವು ನೋಡಿದಾಗ ಇಲ್ಲಿ ಸರ್ವಾಂತರ್ಯಾಮಿಯಾದ ದೇವರನ್ನು,      ಅಂದರೆ ಚೈತನ್ಯವನ್ನು ಚಿಕ್ಕದಾದ ಇಷ್ಟಲಿಂಗದ ಮೂಲಕ ನಮ್ಮನ್ನು ದೇವರ ಮೂರ್ತಿಯತ್ತ ಒಯ್ಯದೇ ನಮ್ಮೊಳಗಿನ ಅಂತರಾತ್ಮವೇ ನಿಜವಾದ ದೇವರೆಂದು ಪರಿಗಣಿಸಿ ಆ ನಿಜದ ಸಿದ್ಧಾಂತವಾಗಿದೆ.

ಉಳ್ಳವರು ಶಿವಾಲಯ ಮಾಡಿಹರು,

ನಾನೇನ ಮಾಡುವೆ ಬಡವನಯ್ಯಾ.

ಎನ್ನ ಕಾಲೇ ಕಂಬ, ದೇಹವೇ ದೇಗುಲ,

ಶಿರ ಹೊನ್ನ ಕಲಶವಯ್ಯಾ.

ಕೂಡಲಸಂಗಮದೇವಾ, ಕೇಳಯ್ಯಾ

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ. / 297

ಜಡರೂಪಿಯಾದ ಶಿವನಿಗಾಗಿ ಉಳ್ಳವರು ದೇವಾಲಯವನ್ನು ಕಟ್ಟಿಸಿದ್ದರೆ, ಚೇತನರೂಪಿಯಾದ ಶಿವನಿಗಾಗಿ ವ್ಯಕ್ತಿಯು ತನ್ನ ಮಯ್ ಮನವನ್ನೇ ದೇವಾಲಯವನ್ನಾಗಿ ಮಾಡಿಕೊಂಡಿರುವ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

‘ಜಡರೂಪಿಯಾದ ಶಿವ’ ಎಂದರೆ ಕಲ್ಲು/ಮಣ್ಣು/ಲೋಹ/ಮರದಿಂದ ಮಾಡಿರುವ ಶಿವನ ವಿಗ್ರಹ.

‘ಚೇತನರೂಪಿಯಾದ ಶಿವ’ ಎಂದರೆ ವ್ಯಕ್ತಿಯ ಅರಿವು ಮತ್ತು ಎಚ್ಚರದ ನಡೆನುಡಿಗಳ ಸಂಕೇತವಾಗಿರುವ ಶಿವ.

ಸದಾ ಶ್ರೀಮಂತರ ಸೇವೆಯಲ್ಲಿ ನಿರತವಾಗುವ ಸ್ಥಾವರ ದೇವರುಗಳ ಬಗ್ಗೆ ಬಸವಣ್ಣನವರಿಗೆ ತಿರಸ್ಕಾರವಿದೆ. ಶ್ರೀಮಂತರಿಗೂ ದೇವಾಲಯಗಳಿಗೂ ಘನವಾದ ಸಂಬಂಧವಿದೆ. ಹಿಂದಿನ ಕಾಲದಲ್ಲಿ ದೇವಾಲಯಗಳು ಶ್ರೀಮಂತರಿಗೆ ಸ್ವಿಸ್‌ ಬ್ಯಾಂಕಗಳಂತೆ ಇದ್ದವು. ಇಂತಹ ವ್ಯವಸ್ಥೆಯನ್ನು ನಿರಾಕರಿಸಿ ದೇಹಾಲಯ ಸಂಸ್ಕೃತಿಯ ಮೂಲಕ ಸಮಾಜದಲ್ಲಿ ಪರಿವರ್ತನೆಗೆ ನಾಂದಿ ಹಾಡಿದರು ನಮ್ಮ ಶರಣರು

4.        ಸಾಂಸ್ಕೃತಿಕವಾಗಿ ಸಾಮಾಜಿಕ ಪರಿವರ್ತನೆ – ವಚನಗಳು ಹಾಗೂ ಶೈಕ್ಷಣಿಕ ಮೌಲ್ಯಗಳು

ಶರಣರು ಸಾರ್ವತ್ರಿಕ ಶಿಕ್ಷಣ, ಮಹಿಳಾ ಶಿಕ್ಷಣ, ವಯಸ್ಕರ ಶಿಕ್ಷಣ ಹೀಗೆ ಸಮಗ್ರ ಶಿಕ್ಷಣದ ಹರಿಕಾರರು. ಶಿಕ್ಷಣದ ಪ್ರಮುಖ ಗುರಿ All round development. ಹಾಗೂ ಸುಪ್ತಕೌಶಲಗಳನ್ನು ಹೊರತರುವ ಹಾಗೂ ಉತ್ತಮ ಸಮಾಜವನ್ನು ಕಟ್ಟುವ ಮತ್ತು ಸಂವಿಧಾನದ ಆಶಯಗಳನ್ನು ಈಡೇಸುವುದೇ ಆಗಿದೆ ಈ ಎಲ್ಲ ಕಾರ್ಯಗಳನ್ನು ಮಾಡಲು 2000 ರಲ್ಲಿ ಸರ್ವ ಶಿಕ್ಷಣ ಅಭಿಯಾನ, ತದನಂತರ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ, ಸಮಗ್ರಶಿಕ್ಷಣ ಅಭಿಯಾನ, Education for all,  Sustainable developmeņt, ಮಿಲೇನಿಯಂ ಡೆವಲಪ್‌ ಮೆಂಟ ಹೀಗೆ ಹತ್ತಾರು ಯೋಜನೆಗಳು ಬಂದರೂ ಸಹ ಪ್ರತಿಶತ ನೂರರಷ್ಟು ಸಾಧನೆಯಾಗಿಲ್ಲ ಆದರೆ ಶರಣು ಕಸಗೂಡಿಸುವ ಸತ್ಯನಿಗೂ, ಸೂಳೆ ಸಂಕವ್ವೆಗೂ ಹೀಗೆ ಹಲವಾರು ಕೆಳಸ್ತರದ ಶರಣ ಶರಣೆಯರಿಗೆ ಶಿಕ್ಷಣ ನೀಡುವ ಮೂಲಕ ವಚನಗಳ ರಚನೆಗೆ ಪ್ರೇರಣೆಯಾದರು. ಹೀಗೆ ಸಮಾಜದಲ್ಲಿ ಶೈಕ್ಷಣಿಕ ಅವಕಾಶಗಳನ್ನು ತೆರೆದಿಟ್ಟು ಎಲ್ಲರನ್ನೂ ಸಾಕ್ಷರತೆಯೆಡಗೆ ಒಯ್ದರು ಹೀಗೆ ಸಮಾಜವನ್ನು ಪರಿವರ್ತನೆ ಮಾಡಿದ್ದನ್ನು ಕಾಣಬಹುದಾಗಿದೆ. ಶೈಕ್ಷಣಿಕವಾಗಿ ನೈತಿಕ ಮೌಲ್ಯಗಳನ್ನು ನೀಡಿದರು

ಏನು ಬಂದಿರಿ ಹದುಳವಿದ್ದಿರೆ ಎಂದಡೆ

ನಿಮ್ಮೈಸಿರಿ ಹಾರಿ  ಹೊಹುದೇ?

ಕುಳ್ಳಿರೆಂದಡೆ ನೆಲಕುಳಿ ಹೊಹುದೇ?

ಒಡನೆ ನುಡಿದಡೆ ಸಿರ,ಹೊಟ್ಟೆಯೊಡೆವುದೇ?

ಕೊಡಲಿಲ್ಲದಿದ್ದಡೊಂದು, ಗುಣವಿಲ್ಲದಿದ್ದಡೆ

ಮೂಗ ಕೊಯ್ವುದ ಮಾಬನೆ

ಕೂಡಲಸಂಗಮದೇವಯ್ಯಾ !!!

                               –ಬಸವಣ್ಣ

ದಿನನಿತ್ಯದ ಬದುಕಿನಲ್ಲಿ ಯಾರಿಗೆ ಯಾರೂ ಕೊಟ್ಟು ಮನೆ ನಡೆಸುವುದಿಲ್ಲ ಆದರೆ ಸಾಮಾಜಿಕ ಜೀವಿಯಾದ ಮನುಷ್ಯ ಮತ್ತೊಬ್ಬರೊಂದಿಗೆ ಹೇಗೆ ವ್ಯವಹರಿಸಬೇಕೆಂಬುದಕ್ಕೆ ಭಾಷ್ಯ ಬರೆದಂತಿದೆ ಈ ವಚನ

           ಈ ವಚನದಲ್ಲಿ ಬಸವಣ್ಣ ಶಿವ ಶರಣರಿಗೆ ಇರಬೇಕಾದ ಆತಿಥ್ಯದ ಗುಣ ಲಕ್ಷಣಗಳನ್ನು ವಿವರಿಸುತ್ತಾನೆ..ಮನೆಗೆ ಬಂದ ಅತಿಥಿಗಳನ್ನು ಸೌಜನ್ಯದಿಂದ ಮಾತನಾಡಿಸಿ ಅವರ ಯೋಗ ಕ್ಷೇಮ ವಿಚಾರಿಸಿದರೆ ನಮ್ಮ ಸಿರಿತನ ಹಾರಿ ಹೋಗುತ್ತದೆಯೇ ಎಂದು ಕಟುವಾಗಿ ಪ್ರಶ್ನಿಸುತ್ತಾರೆ…ಅದೇ ರೀತಿ ಅವರನ್ನು ಕುಳಿತು ಕೊಳ್ಳಲು ಆಹ್ವಾನ ನೀಡಿದರೆ,ನೆಲ ತಗ್ಗಿ ಹೋಗುತ್ತದೆಯೇ ಎಂದು ಮತ್ತೊಮ್ಮೆ ಪ್ರಶ್ನಿಸುತ್ತಾ ಮನೆಗೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸುವುದು ಸೌಜನ್ಯದ ಲಕ್ಷಣ; ಹಾಗೆ ಮಾಡದಿರುವುದು ಮತ್ತು ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡದಿರುವುದು ಸಜ್ಜನರ ಲಕ್ಷಣವಲ್ಲ ಎಂದು ಹೇಳುತ್ತಾರೆ.

            ಮಾನವನ ವ್ಯಕ್ತಿತ್ವ ವಿಕಸನದ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ವಚನಗಳು ಸಮತೂಕದ ನಿಲವು ಹೊಂದಿವೆ. ವ್ಯಕ್ತಿತ್ವ ಸುಧಾರಣೆಯಿಂದ ಸಮಾಜ ತನ್ನಿಂದ ತಾನೇ ಸುಧಾರಣೆಯಾಗಬಲ್ಲದು@

            ವಯಸ್ಸಿನಲ್ಲಿ ಕಿರಿಯರಾದರೂ ಚೆನ್ನಬಸವನು, ಚೆನ್ನಬಸವಣ್ಣನಾದ, ಅಯ್ಯಾ ಎಂಬ ಗೌರ್ವಾನ್ವಿತ ಪದದಿಂದ ಕೊನೆಗೊಳ್ಳುವ ಎಲ್ಲ ಶರಣರು( ಮಾರಯ್ಯ, ಚೆನ್ನಯ್ಯ, ಹರಳಯ್ಯ, ಕೇತಯ್ಯ, ಚೆಂದಯ್ಯ ಇತ್ಯಾದಿ) ಸ್ತ್ರೀಯರಲ್ಲಿಯೂ ಲಿಂಗಮ್ಮ, ಲಕ್ಕಮ್ಮ, ಸತ್ಯಕ್ಕ, ಕಾಳವ್ವೆ ಮುಂತಾದ ಹೆಸರಿನಲ್ಲಿ ಅಮ್ಮ, ಅವ್ವ, ಅಕ್ಕ ಪದಗಳಿಂದಾಗಿ ಶೆರಣರು ಸಂಬಂಧಗಳನ್ನು ಹತ್ತಿರವಾಗಿಸಿಕೊಂಡವರು.

                        ಅಪ್ಪನು ನಮ್ಮ ಮಾದಾರ ಚೆನ್ನಯ್ಯ,

                       ಬೊಪ್ಪನು ನಮ್ಮ ಡೋಹರ ಕಕ್ಕಯ್ಯ,

                        ಚಿಕ್ಕಯ್ಯ ನೆಮ್ಮಯ್ಯ ಕಾಣಯ್ಯ,

                        ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ,

                        ಎನ್ನನೇತಕ್ಕರಿಯಿರಿ ಕೂಡಲಸಂಗಯ್ಯ ?

                           – ಬಸವಣ್ಣ

ಎಲ್ಲರನ್ನೂ ಅಪ್ಪ, ಅಣ್ಣ ಎಂದು ಕರೆದು ಬಸವಣ್ಙನವರು ಲೋಕವೇ ಒಂದು ಮನೆ ಎಂಬ ತತ್ವ ಆಚರಣೆಗೆ ತಂದರು ಇಂಥ ಪ್ರಯೋಗ ಮುಂದೆ ಸ್ವಾಮಿ ವಿವೇಕಾನಂದರು ಚಿಕ್ಯಾಗೋ ಧರ್ಮ ಸಮ್ಮೇಳನದಲ್ಲಿ ಬ್ರದರ್ಸ ಯಾಂಡ್‌ ಸಿಸ್ಟರ್ಸ ಎಂಬ ಸಂಬಂಧವಾಚಿಗಳಿಂದ ಜನರನ್ನು ಚುಂಬಕದಂತೆ ಆಕರ್ಷಿಸಿದ್ದನ್ನು ನೆನೆದುಕೊಳ್ಳಬಹುದು.

ಲೋಕದ ಡೊಂಕ ನೀವೇಕೆ ತಿದ್ದುವಿರಿ

ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;

ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.

ನೆರೆಮನೆಯ ದಃಖಕ್ಕೆ ಅಳುವವರ ಮೆಚ್ಚ

ಕೂಡಲಸಂಗಮದೇವ. / 1143

ಈ ವಚನದ ಮೂಲಕ ವೈಯಕ್ತಿಕ ಸುಧಾರಣೆಯಿಂದ ಸಮಾಜ ಸುಧಾರಣೆ ಸಾಧ್ಯ ಎಂಬ ಮೌಲ್ಯಗಳನ್ನು ಇದು ಹೊಂದಿದೆ

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,

ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,

ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.

ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ

ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ. / 493

ಪ್ರತಿಯೊಬ್ಬ ಕಾಯಾ ವಾಚಾ ಮನಸಾ ಶುದ್ಧನಾಗಿ ಬಾಳಿದರೆ ಮಾತ್ರ ಆ ಚೈತನ್ಯ ಸ್ವರೂಪಿ ದೇವರನ್ನು ಒಲಿಸಿ ಕೊಳ್ಳಲು ಸಾಧ್ಯ ಎಂಬುದನ್ನು ವಚನಕಾರರು ಈ ಸಪ್ತಸೂತ್ರಗಳನ್ನು ನೀಡಿದ್ದಾರೆ.

ದೇವಲೋಕ ಮತ್ರ್ಯಲೋಕವೆಂಬುದು ಬೇರಿಲ್ಲ ಕಾಣಿರೋ !

ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮತ್ರ್ಯಲೋಕ. ಆಚಾರವೆ ಸ್ವರ್ಗ, ಅನಾಚಾರವೆ ನರಕ. ಕೂಡಲಸಂಗಮದೇವಾ, ನೀವೆ ಪ್ರಮಾಣು. / 753

ಸ್ವರ್ಗ ನರಕಗಳನ್ನು ಸಾವಿನ ಅನಂತರ ಅಧ್ಯಾಯವಾಗಿ ಎಂದೂ ಭಾವಿಸದೇ ಅವೆರಡೂ ಇಲ್ಲೇ ನಮ್ಮ ನಡೆ ನುಡಿಯಲ್ಲಿ ಎಂದು ಹೇಳಿದರು

ಕಂಡ ಭಕ್ತರಿಗೆ ಕೈಮುಗಿಯುವಾತನೆ ಭಕ್ತ,

ಮೃದುವಚನವೆ ಸಕಲ ಜಪಂಗಳಯ್ಯಾ,

ಮೃದುವಚನವೆ ಸಕಲ ತಪಂಗಳಯ್ಯಾ,

ಸದುವಿನಯವೆ ಸದಾಶಿವನ ಒಲುಮೆಯಯ್ಯಾ.

ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ. / 450

ಸದಾ ಎಲ್ಲರಿಗೂ ಹಿತವಾಗುವಂತೆ ಆಡುವ ಮಾತು ಜಪ,ತಪಕ್ಕೆ ಸಮಾನವಾದದ್ದು, ದೇವರ ಸಾಕ್ಷಾತ್ಕಾರಕ್ಕೆ ಏನೆಲ್ಲಾ ಕಷ್ಟಪಡುತ್ತೇವೆ. ಉಪವಾಸ, ವನವಾಸ, ಕಠಿಣವಾದ ತಪಸ್ಸು ಎಲ್ಲಾ ಮಾಡುತ್ತೇವೆ. ವಿನಯವಂತಿಕೆ, ಪ್ರೀತಿ ತುಂಬಿದ ಮಾತಿನ ಮುಂದೆ ಕಠಿಣ ಮಾರ್ಗಗಳ ಅವಶ್ಯಕತೆ ಇಲ್ಲ. ದೇವರ ಒಲುಮೆಗೆ ಮೃದುವಾಗಿ, ವಿನಯಪೂರಿತವಾಗಿ ಬೇರೆಯವರಿಗೆ ನೋವಾಗದ ರೀತಿಯಲ್ಲೇ ನುಡಿದರೆ ಸಾಕು ಇದೇ ವಿಚಾರಧಾರೆಯನ್ನು ಈ ಕೆಳಗಿನ ವಚನವೂ ಪುಷ್ಠೀಕರಿಸುತ್ತದೆ.

ನುಡಿದರೆ ಮುತ್ತಿನ ಹಾರದಂತಿರಬೇಕು

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು

ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು”

ಹೀಗೆ ಶೈಕ್ಷಣಿಕ ಮೌಲ್ಯಗಳ ಭಕ್ತಿಭಂಡಾರವನ್ನೇ ನಮ್ಮ ಶರಣರ ವಚನದಲ್ಲಿ ನೋಡಲು ಸಾಧ್ಯ. ನುಡಿದಂತೆ ನಡೆದು ತೋರಿಸಿ ಶೈಕ್ಷಣಿಕ ಮೌಲ್ಯಗಳನ್ನು ತಮ್ಮ ವಚನದ ಮೂಲಕ ತೋರಿಸಿದ್ದಾರೆ ಇಂದು ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಅವಶ್ಯಕತೆ ಇರುವದರಿಂದ ಇವೇ ನಮಗೆ ದಾರಿದೀಪವಾಗಲಿವೆ.

ಮಹಿಳೆ ಪುರುಷರಿಗಾಗಿ ಜಗತ್ತಿಲ್ಲಿಯೇ ಮೊದಲು ವಯಸ್ಕರ ಶಿಕ್ಷಣ ಅನುಭವ ಮಂಟಪದ ಮೂಲಕ ಸಿಗುತ್ತಿತ್ತು.

ಮನೋವಿಜ್ಞಾನಿಯಾಗಿ ಸಮಾಜದ ಪರಿವರ್ತನೆ ಮಾಡಿದ ಶರಣರು

ನಮ್ಮ ಶರಣರೆಲ್ಲರೂ ಮನೋವಿಜ್ಞಾನಿಗಳಂತೆ ಕೆಲಸ ಮಾಡಿರುವರು ನೊಂದವರ ಬಗೆಗೆ ಅಪಾರ ಕನಿಕರ. ಅವರಿಗೆ ಮಾತೃಹೃದಯ. ಇದು ಬರೀ ಸಾಂತ್ವನವಲ್ಲ ಸಹಾನೂಭೂತಿ ಮಾತ್ರವೂ ಅಲ್ಲ ೂ ಇಲ್ಲಇಲ್ಲಿ ಬಡವರ, ಹಿಂದುಳಿದವರ. ಅಂಚಿನಲ್ಲಿರುವವರ ಬಗೆಗೆ ಅನುಕಂಪ ಮಾತ್ರ ಇಲ್ಲ ಅವರಲ್ಲಿ ಸ್ಪೂರ್ತಿ ತುಂಬಿ ಛಲ ಮೂಢಿಸಿ ಮುನ್ನಡೆಸುವ ಕಕ್ಕುಲತೆಯಿದೆ. ಇದು ಇಂದಿನ ಜಗಕೆ ಪ್ರಧಾನವಾಗಿ ಜನನಾಯಕರಿಗೆ ಮಾದರಿಯಾಗಬೇಕಿದೆ.

            ಮನೋವಿಜ್ಞಾನಿ ಮಾನವನ ವಿಕಾರ ಬುದ್ಧಿಯನ್ನು, ಆಲೋಚನೆಯನ್ನು ಸರಿಪಡಿಸುತ್ತಾನೆ ಹಾಗೆಯೇ ಶರಣರು ಮಾರಿ, ಮಸಣ ಬೇರೆಲ್ಲಿಯೂ ಇಲ್ಲ ಎಂಬುದರ ಮೂಲಕ ಮಾನವನ ಕೆಟ್ಟ ಆಲೋಚನೆಗಳನ್ನು ಬಿಡಲು ತಮ್ಮ ವಚನಗಳ ಮೂಲಕ ತಿಳಿಸುತ್ತಾರೆ.

ಮಾರಿ ಮಸಣಿಯೆಂಬವು ಬೇರಿಲ್ಲ ಕಾಣಿರೋ.

ಮಾರಿಯೆಂಬುದೇನು

ಕಂಗಳು ತಪ್ಪಿ ನೋಡಿದಡೆ ಮಾರಿ,

ನಾಲಗೆ ತಪ್ಪಿ ನುಡಿದಡೆ ಮಾರಿ,

ನಮ್ಮ ಕೂಡಲಸಂಗಮದೇವರ ನೆನಹ ಮರೆದಡೆ ಮಾರಿ. / 1054

ವಿಶ್ವಭಾತೃತ್ವ ಪರಿಕಲ್ಪನೆಯ ಜಾರಿ ಮೂಲಕ ಸಮಾಜದ ಪರಿವರ್ತನೆಕಾರರಾಗಿ ಶರಣರು

1945 ರ ಎರಡನೇಯ ಮಹಾಯುದ್ಧದ ನಂತರ ವಿಶ್ವಶಾಂತಿ, ವಿಶ್ವಭಾತೃತ್ವವನ್ನು ತರಲು ವಿಶ್ವಸಂಸ್ಥೆ ಪ್ರಯತ್ನಿಸುತ್ತದೆ. ಆದರೆ ಶರಣರು 12 ನೇ ಶತಮಾನದಲ್ಲಿಯೇ ವಿಶ್ವಭಾತೃತ್ವವನ್ನು ಸಾಧಿಸಿದವರು.

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ.

ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ.

ಕೂಡಲಸಂಗಮದೇವಾ

ನಿಮ್ಮ ಮನೆಯ ಮಗನೆಂದೆನಿಸಯ್ಯಾ. / 268

ಎನ್ನುವುದರ ಮೂಲಕ ಎಲ್ಲರನ್ನೂ ತನ್ನಮನೆಯ ಮಗನೆಂದು ತಿಳಿಯುವ ವಿಶ್ವಭಾತೃತ್ವ ಇದರಲ್ಲಿ ಅಡಗಿದೆ. ಒಬ್ಬನೇ ದೇವರು ಒಂದೇ ಜಗತ್ತು ಒಂದೇ ಮಾನವ ಜನಾಂಗದ ಕಲ್ಪನೆಯನ್ನು ಸಕಾರಗೊಳಿಸಿದ್ದು ವಚನಕಾರರೇ.

            ವಿಶ್ವಸಂಸ್ಥೆ ಮಾನವ ಹಕ್ಕುಗಳ ಘೋಷಣೆಯ 30 ಅಂಶಗಳೂ ಬಸವಣ್ಣನವರ ವಚನಗಳಲ್ಲಿವೆ.

ಪ್ರಜಾಪ್ರಭುತ್ವ ಆಚರಣೆಯ ಮೂಲಕ ಸಮಾಜದ ಪರಿವರ್ತನೆ

12 ನೇ ಶತಮಾನಕ್ಕೂ ಮೊದಲು ಪ್ರಜಾಪ್ರಭುತ್ವದ ಬೃಹತ್‌ ಪ್ರಯೋಗ ಜಗತ್ತಿನ ಯಾವ ಮೂಲೆಯಲ್ಲೂ ನಡೆದಿಲ್ಲ. ಉತ್ತಂಗಿ ಚನ್ನಪ್ಪನವರು ಹೇಳಿದಂತೆ “ಅನುಭವ ಮಂಟಪ” ಜಗತ್ತಿನ ಮೊದಲ ಪ್ರಜಾಪ್ರಭುತ್ವ.

            ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವವೆಂದು ಬೀಗುವ ನಾವು ನಿಜವಾಗಿಯೂ ಆ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದೇವೆಯೇ? ನಮ್ಮಲ್ಲಿ ಸಮಾನತೆ, ಸಹೋದರತೆ ಭಾವ ನಿಜವಾಗಿಯೂ ಇದೆಯೇ? ಎಂಬ ಪ್ರಶ್ನೆಯ ಉತ್ತರಕ್ಕೆ ತಡಕಾಡಬೇಕಾಗಬಹುದು. ಇಂತಹ ಗೊಂದಲಕ್ಕೆ ಉತ್ತರ ವಚನಗಳಲ್ಲಿದೆ.

ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು

ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ

ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಗಿಂತ ಕರಕಷ್ಟ

ಕೂಡಲಸಂಗಮದೇವಾ. / 498           

 ಮಾನವನ ಸ್ವಾರ್ಥಗುಣ ಕಂಡು ವೇದನೆಯೊಂದಿಗೆ ಆಪ್ತವಾಗಿ ತಿಳಿಹೇಳುವಂತಿದೆ ಈ ಸಾಲುಗಳು

            ಅದರಂತೆ ಭಾರತದ ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವ ಸರ್ವಧರ್ಮ ಸಮನ್ವಯ, ಪ್ರಜಾಸತ್ತಾತ್ಮಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ಸ್ಥಾನಮಾನ, ಅವಕಾಶ ಹಾಗೂ ಸಮಾನತೆ, ವ್ಯಕ್ತಿಗೌರವ ಹಾಗೂ ಭಾತೃತ್ವ ಭಾವನೆ ಇವೆಲ್ಲವೂ ಅನುಭವ ಮಂಟಪದಲ್ಲಿ, ಶರಣರ ಕಾಲದಲ್ಲಿ ಇರುವ ಮೌಲ್ಯಗಳೇ ಆಗಿವೆ ಆದ್ದರಿಂದ ಇವೆಲ್ಲ ವಚನಗಳ ಪ್ರಭಾವವೆಂದೇ ಹೇಳಬಹುದು.

            ಬಸವಣ್ಣನವರು ಹಾಗೂ ಬಸವಾದಿ ಶರಣರು ವ್ಯಕ್ತಿ ಸ್ವಾತಂತ್ಯ್ರ ಹಾಗೂ ಪ್ರಜಾಪ್ರಭುತ್ವವಾದಿ ಎಂಬುದಕ್ಕೆ ಅನುಭವ ಮಂಟಪವೇ ಸಾಕ್ಷಿಯಾಗಿದೆ. ಸಮಾಜದ ಕೊಟ್ಟಕೊನೆಯ ವ್ಯಕ್ತಿಯೂ ಮೇಲೆ ಬರಬೇಕೆಂಬುದು ಅವರ ಹಂಬಲವಾಗಿತ್ತು. ಶೋಷಣೆ ಯಾವ ವೇಷದಲ್ಲಿದ್ದರೂ ದೂಷ್ಯವೆಂದು ಸಾರಿದರು. ಸಿರಿತನ ಪದವಿಗಳನ್ನು ಉಗ್ರವಾಗಿ ವಿರೋಧಿಸಿದರು. ಒಟ್ಟಾರೆ ಪ್ರಜಾಬ್ರುತ್ವದ ವಾಸ್ತವ ಆಶಯಗಳನ್ನು ನಿಜವಾಗಿ ಆಚರಣೆಗೆ ತಂದವರು ಶರಣರು. ಈ ಮೂಲಕ ಸಮಾಜಿಕ ಪರಿವರ್ತನೆಗೆ ಮುಂದಾದರು

ಅಹಿಂಸಾತತ್ವದ ಮೂಲಕ ಸಮಾಜದ ಪರಿವರ್ತನೆ

ವಚನಗಳು ಅಹಿಂಸಾ ತತ್ವವನ್ನು ಸಾರಿ ಸಾರಿ ಹೇಳುತ್ತಿವೆ ಅದರಂತೆ ಶರಣರು ಬದುಕಿ ತೋರಿಸಿದರು.

ದಯವಿಲ್ಲದ ಧರ್ಮವದೇವುದಯ್ಯಾ

ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.

ದಯವೇ ಧರ್ಮದ ಮೂಲವಯ್ಯಾ,

ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ. / 726

ಈ ವಚನದ ಮೂಲಕ ವಚನಕಾರರು ಸಕಲ ಪ್ರಾಣಿಗಳಿಗೆ ಲೇಸನ್ನೇ ಬಯಸಿ ಧರ್ಮಪಾಲನೆ ಮಾಡಿರುವುದು ತೋರುವುದು ಹೀಗೆ ಶರಣಾಧಿ ಪ್ರಮುಖರು ಅಹಿಂಸಾ ತತ್ವದಲ್ಲಿ ಅಚಲ ನಂಬಿಕೆ ಇಟ್ಟಿದ್ದನ್ನು ಕಾಣಬಹುದು.

1924 ರಲ್ಲಿ ಬೆಳಗಾವಿಯಲ್ಲಿ ನಡೆದ AICC ಅಧಿವೇಶನದಲ್ಲಿ ಗಾಂಧೀಜೀಯವರು ಅಧ್ಯಕ್ಷೀಯ ಭಾಷಣದಲ್ಲಿ ಹೀಗೆ ಹೇಳಿದರು “ ಬಸವಣ್ಣನವರು 800 ವರ್ಷಗಳ ಹಿಂದೆ ತಿಳಿಸಿದ ಮತ್ತು ಆಚರಿಸಿದ ತತ್ವಗಳನ್ನು ಕಾರ್ಯರೂಪಕ್ಕೆ ತರಲು ನನ್ನಿಂದ ಸಾಧ್ಯವಿಲ್ಲ. ಅವುಗಳಲ್ಲಿನ ಕೆಲವೊಂದನ್ನು ನಾನು ಸ್ವೀಕರಿಸಿದ್ದೇನೆ. ನಾನು ಅವುಗಳಲ್ಲಿ ಪರಿಪೂರ್ಣತೆ ಸಾಧಿಸಿಲ್ಲ. ಸಾಧನೆಯ ಹಂತದಲ್ಲಿದ್ದೇನೆ. ಅಸ್ಪೃಶ್ಯತಾ ನಿವಾರಣೆ ಮತ್ತು ಕಾಯಕ ಗೌರವ ಅವರ ಮುಖ್ಯ ಕಾರ್ಯಕ್ರಮಗಳಲ್ಲಿ ಇದ್ದವು ಅವರ ಅರಿವು ಮತ್ತು ಆಚಾರಗಳಲ್ಲಿ ಜಾತೀಯತೆಯ ನೆರಳು ಕೂಡ ಕಾಣಲು ಸಾಧ್ಯವಿಲ್ಲ ಅವರು ನಮ್ಮ ಕಾಲದಲ್ಲಿ ಬದುಕಿದ್ದರೆ, ಪೂಜಾರ್ಹ ಸಂತರಾಗಿರುತ್ತಿದ್ದರು ಅವರ ಅನುಯಾಯಿಗಳಾದ ನೀವು ಅವರ ತತ್ವಗಳನ್ನು ಆಚರಣೆಗೆ ತಂದರೆ ಭಾರತವನ್ನಷ್ಟೇ ಅಲ್ಲ ಇಡೀ ಜಗತ್ತನ್ನೇ ಮೇಲಕ್ಕೆತ್ತ ಬಲ್ಲಿರಿ

            ಒಟ್ಟಿನಲ್ಲಿ ಹೇಳಬೇಕೆಂದರೆ ಈ ಎಲ್ಲ ವಿಷಯಗಳನ್ನು ಅವಲೋಕಿಸಿದರೆ ನಮ್ಮ ಶರಣರು ಪ್ರಭಾವಬೀರದೇ ಇರುವ ಕ್ಷೇತ್ರಗಳೇ ಇಲ್ಲ. ಆ ಕಾಲಘಟ್ಟದಲ್ಲಿ ಮೂಲಕ ಉತ್ತಮ ಮೌಲ್ಯಗಳನ್ನು ಒಳಗೊಂಡ ಸಮಸಮಾಜದ ನಿರ್ಮಾಣವನ್ನು ಮಾಡಿದ್ದನ್ನು ಕಾಣಬಹುದು. ಉದಾತ್ತೀಕರಣಕ್ಕೆ ಶರಣರು ಕಾರಣೀಕರ್ತರಾದರು.

            ಹೀಗೆ ಶರಣರು ಅಸ್ಪಶ್ಯತೆಯನ್ನು ನಿರ್ಮೂಲನಗೊಳಿಸಿ, ಜಾತೀಯತೆಯನ್ನು ತೊಡೆದುಹಾಕಿ, ಸ್ತ್ರೀ ಪುರುಷ ಬೇದವನ್ನಳಿಸಿ, ವರ್ಗ, ವರ್ಣ, ಜಾತಿ ರಹಿತ, ಸಾಂಸ್ಥಿಕವಲ್ಲದ ಸಮಾಜವನ್ನು ಕಟ್ಟುವ ಮೂಲಕ ಸಮಾಜದ ಪರಿವರ್ತನೆಯ ಹರಿಕಾರರಾದರು 

            ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಶರಣ ತತ್ವಗಳನ್ನು ಸಮರ್ಥವಾಗಿ ಅರ್ಥೈಸಿಕೊಂಡು ಅವುಗಳನ್ನು ನಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಂಡು ಶರಣರ ಆಶಯಗಳಂತೆ ಬದುಕೋಣ ನಮ್ಮ ಬದುಕನ್ನು ಹಸನಗೊಳಿಸೋಣ.

2 thoughts on “ಸಾಮಾಜಿಕ ಪರಿವರ್ತನೆಕಾರರು ಕಲ್ಯಾಣ ಶರಣರು 

  1. ಎಂದೆಂದೂ ಪ್ರಸ್ತುತ ವಾಗುವ ಶರಣಧಮ೯ದ
    ಬಗೆಗೆ ಅತ್ಯಂತ ಪ್ರಬುದ್ಧ ಚಿಂತನೆ ಮೇಡಂ ಧನ್ಯವಾದಗಳು.

  2. ಆರ್ಥರ್‌ ಮೈಲ್‌ ಹೇಳುತ್ತಾರೆ “ ಭಾರತದ ಮೊಟ್ಟಮೊದಲ ಸ್ವತಂತ್ರ ವಿಚಾರವಾದಿ ( First Indian free Thinker) ಬಸವಣ್ಣ. ಅವರನ್ನು ಭಾರತದ ಮಾರ್ಟಿನ್‌ ಲೂಥರ ಎನ್ನಬಹುದು. ವಿಚಾರವಾದದ ದೃಷ್ಠಿಯಿಂದ ಬಸವಣ್ಣನನ್ನು ಲೂಥರನಿಗೆ ಹೋಲಿಸಬಹುದಾದರೂ, ಹೋಲಿಕೆ ಪರಿಪೂರ್ಣವಲ್ಲ ಎಂದೇ ಹೇಳಬಹುದು.

    ಆರ್ಥರ್‌ ಮೈಲ್ಸ್‌ ಬರೆದ ಯಾವ ಪುಸ್ತಕದಲ್ಲಿ ಈ ವಿಷಯ ಉಲ್ಲೇಖವಾಗಿದೆ???

    ವಿಶ್ವಸಂಸ್ಥೆ ಮಾನವ ಹಕ್ಕುಗಳ ಘೋಷಣೆಯ 30 ಅಂಶಗಳೂ ಬಸವಣ್ಣನವರ ವಚನಗಳಲ್ಲಿವೆ.
    When they are documented or implemented? Can you explain or at least mention what these articles please.

Leave a Reply

Back To Top